ಹೊಸ ವಸ್ತುಗಳು , ಹೊಸ ಸಂಗತಿಗಳು ನಿಮ್ಮ ಬದುಕಿನಲ್ಲಿ ಪ್ರವೇಶ ಪಡೆದು,ನಿಮ್ಮನ್ನು ಸಂತೋಷಪಡಿಸಬಹುದು. ಆದರೆ,ಕಳೆದುಹೋದ ಅಮೂಲ್ಯ ವಸ್ತುಗಳ ಸ್ತಳಕ್ಕೆ ಸೂಕ್ತವಾದ ಯಾವ ವಸ್ತುಗಳು ಮತ್ತೆ ಬರುವುದಿಲ್ಲ.
ಇಂಗ್ಲಿಷ್ ನ 6 ಪದಗಳಲ್ಲಿ ಮಾತ್ರ UU ಅಕ್ಷರಗಳು ಸಂಯೋಗಗೊಂಡಿವೆ. ಅವು Muumuu , vacuum , Continuum , duumvirate ಮತ್ತು residuum . ಇವುಗಳನ್ನು ಓದಲು ಸ್ವಲ್ಪ ತೊಂದರೆಯಾಗಬಹುದು. ಅರ್ಥವಿಲ್ಲದ್ದು ಅಂದುಕೊಳ್ಳಬೇಡಿ, ಇವುಗಳಿಗೆ ಅರ್ಥವೂ ಇವೆ. (ಸಂಗ್ರಹ )
ಗ್ರಾಫೈಟ್ಪೆನ್ಸಿಲ್
ಪೆನ್ಸಿಲ್ಪದದಮೂಲಲ್ಯಾಟಿನ್ಭಾಷೆಯ "ಪೆನ್ಸಿಲಸ್"ಎಂಬಪದ. ಇದರಅರ್ಥ "ಸಣ್ಣಚೂಪಾದಬ್ರಶ್"ಎಂದು. ಈಗನಾವುಬಳಸುವಪೆನ್ಸಿಲ್ಗೆಈಹೆಸರುನೀಡಿಜನಪ್ರಿಯಗೊಳಿಸಿದ್ದುಕಾಂಟೆ. ೧೭೯೫ರಲ್ಲಿಇದನ್ನುತಯಾರಿಸಿದರು. ಕಾಂಟೆಪೆನ್ಸಿಲ್ ತಯಾರಿಸಲುಬಳಸಿದವಿಧಾನಇಂದಿಗೂಬಳಕೆಯಲ್ಲಿದೆ.ಗ್ರಾಫೈಟ್ಅನ್ನುಕೆಲವುಮಿಶ್ರಣದಲ್ಲಿಬೆರೆಸಿಒತ್ತುವಯಂತ್ರದಮೂಲಕಹಾಯಿಸಿತೆಳ್ಳನೆಆಕಾರಕ್ಕೆತರುತ್ತಾರೆ. ಇದೇವೇಳೆ ,ಈತೆಳ್ಳನೆ ಗ್ರಾಫೈಟ್ ಸೇರಿಸಲು ಬೇಕಾದ ಕಟ್ಟಿಗೆಯ ತುಂಡುಗಳನ್ನು ಸಿದ್ದ ಮಾಡಿ, ಅದರೊಳಗೆ ಗ್ರಾಫೈಟ್ ತುಂಡನ್ನು ಕೂರಿಸುತ್ತಾರೆ. ಪ್ರಸ್ತುತ ಜಗತ್ತಿನಲ್ಲಿ 350 ಪರಿಮಳಗಳಲ್ಲಿ , 72 ಬಣ್ಣಗಳಲ್ಲಿ ತಯಾರಾಗುತ್ತದೆ. ಕಪ್ಪು ಗ್ರಾಫೈಟ್ ಪೆನ್ಸಿಲ್ ನಲ್ಲಿ 19 ರೀತಿ ಇವೆ. ಇವುಗ್ರಾಫೈಟ್ ಒರಟುತನದಆಧಾರದಮೇಲೆ ಪ್ರತ್ಯೇಕಗೊಳಿಸಲಾಗಿದೆ . ಕಾಗದವಲ್ಲದೆವಿವಿಧಮೇಲ್ಮೈಮೇಲೆಬರೆಯುವಂಥಪೆನ್ಸಿಲ್ಗಳೂಇವೆ. (ಸಂಗ್ರಹ )
Friday, September 10, 2010
ಸುಭಾಷಿತ
೧. ನಿಮ್ಮ ಸ್ನೇಹಿತರನ್ನು ಮತ್ತು ನಿಮ್ಮ ಶತ್ರುಗಳನ್ನು ಪ್ರೀತಿಯಿಂದ ಕಾಣಿ. ನಿಮ್ಮ ಗೆಲುವಿಗೆ ನಿಮ್ಮ ಸ್ನೇಹಿತರು ನೆರವಾಗುತ್ತಾರೆ. ಆದರೆ ನೀವು ಗೆಲ್ಲುವುದಕ್ಕೆ ನಿಮ್ಮ ಶತ್ರುಗಳು ಕಾರಣವಾಗುತ್ತಾರೆ
ನಗೆಹನಿ ಹೆಂಡತಿ : ನಾನು ಆಧುನಿಕ ವಚನ ಸಾಹಿತ್ಯ ಬರೆದಿದ್ದೇನೆ ಕಣ್ರೀ... ಗಂಡ : ಹಾಗೆಂದರೇನು? ಹೆಂಡತಿ : "ನೋಡಲೊಂದು ಟಿ.ವಿ. ,ಮಾತಾಡಲೊಂದು ಮೊಬೈಲ್ , ಆಡಲೊಂದು ಕಂಪ್ಯೂಟರ್ , ಜೊತೆಗೆ ನಿತ್ಯ ಹೋಟೆಲ್ ಊಟ, ಖರ್ಚಿಗೊಂದು ಕ್ರೆಡಿಟ್ ಕಾರ್ಡ್ - ಇಷ್ಟಿದ್ದರೆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ .
Wednesday, September 8, 2010
1. ಕೋಲ್ಯ ಬಟ್ಟೆ ಆರಿಸಲೆಂದು ಒಂದು ಗಾರ್ಮೆಂಟ್ಸ್ ಅಂಗಡಿಗೆ ಹೋದ. ಎಲ್ಲವನ್ನು ಹುಡುಕಿದ ಮೇಲೆ ರೆಡಿಮೇಡ್ ಷರ್ಟ್ ಯಾವುದೂ ಅವನಿಗೆ ಇಷ್ಟವಾಗಲಿಲ್ಲ. ಕೊನೆಗೆ .... ಕೋಲ್ಯ ; ಒಂದು ಒಳ್ಳೆಯ ಷರ್ಟ್ ಪೀಸ್ ತೋರಿಸಿ. .. ಮಾಲೀಕ ; ಪ್ಲೇನ್ ನಲ್ಲಿ ತೋರಿಸಲಾ? ಕೋಲ್ಯ ; ಛೇ..ಇಷ್ಟು ಚಿಕ್ಕ ಪೀಸ್ ಬಟ್ಟೆಗಾಗಿ ಪ್ಲೈನ್ ಯಾಕೆ? . ನಿಮ್ಮ ಅಂಗಡಿಯಲ್ಲೇ ತೋರಿಸಿ..
2. ಭಿಕ್ಷುಕ :ಅಮ್ಮ ,ತಾಯಿ, ಏನಾದರೂ ಇದ್ದರೆ ಕೊಡಮ್ಮ, ಮಾಲಿಕ : ನನ್ನ ಹೆಂಡ್ತಿ ಇಲ್ಲ . ಮುಂದಕ್ಕೆ ಹೋಗಯ್ಯ. ಭಿಕ್ಷುಕ : ಸ್ವಾಮಿ, ನಾನು ಕೇಳಿದ್ದು ಭಿಕ್ಷೆಯನ್ನು , ನಿಮ್ಮ ಹೆಂಡತಿಯನ್ನಲ್ಲ.
3.ಕೋಲ್ಯನ ತಂದೆ ತುಂಬಾ ಸಿಟ್ಟಿನಲ್ಲಿದ್ದರು. ಆಗ ತಾನೆ ಪರೀಕ್ಕ್ಷೆ ಮುಗಿಸಿ ಮನೆಗೆ ಬಂದ ಕೋಲ್ಯನನ್ನು ಕೇಳಿದರು,
"ಕೋಲ್ಯ ಟೆಸ್ಟ್ ನಲ್ಲಿ ಎಷ್ಟು ಪ್ರಶ್ನೆ ಕೇಳಿದ್ದರು?"
ಕೋಲ್ಯ-"೫"
ಕೋಲ್ಯ ನ ತಂದೆ ;" ಅದರಲ್ಲಿ ಎಷ್ಟು ಪ್ರಶ್ನೆಗಳಿಗೆ ನೀನು ಉತ್ತರಿಸಲ್ಲಿಲ್ಲ ?
ಕೋಲ್ಯ -" ಮೂದಲ ೩ ಮತ್ತು ಕೊನೆಯ ೨ .
4. ಪೆಟ್ರೋಲ್ ಹಾಕುವವ : ಸರ್, ಎಷ್ಟು ಲೀಟರ್ ಪೆಟ್ರೋಲ್ ಹಾಕಲಿ? ಗ್ರಾಹಕ : ಲೀಟರ್ ಗೀಟರ್ಎಲ್ಲ ಬೇಡ , ಒಂದು 10 -15
ರೂಪಾಯಿದು ಪೆಟ್ರೋಲ್ ಗಾಡಿ ಮೇಲೆ ಚಿಮುಕಿಸಿ ಬಿಡು,
ಗಾಡಿಗೆ ಬೆಂಕಿ ಹಚ್ಚಿಟ್ಟು,ಮನೆಗೆ ನಡೆದುಕೊಂಡು ಹೋಗುತ್ತೇನೆ..