ಇಂಗ್ಲಿಷ್ ನ 6 ಪದಗಳಲ್ಲಿ ಮಾತ್ರ UU ಅಕ್ಷರಗಳು ಸಂಯೋಗಗೊಂಡಿವೆ. ಅವು Muumuu , vacuum , Continuum , duumvirate ಮತ್ತು residuum . ಇವುಗಳನ್ನು ಓದಲು ಸ್ವಲ್ಪ ತೊಂದರೆಯಾಗಬಹುದು. ಅರ್ಥವಿಲ್ಲದ್ದು ಅಂದುಕೊಳ್ಳಬೇಡಿ, ಇವುಗಳಿಗೆ ಅರ್ಥವೂ ಇವೆ. (ಸಂಗ್ರಹ )
ಗ್ರಾಫೈಟ್ ಪೆನ್ಸಿಲ್
ಪೆನ್ಸಿಲ್ ಪದದ ಮೂಲ ಲ್ಯಾಟಿನ್ ಭಾಷೆಯ "ಪೆನ್ಸಿಲಸ್"ಎಂಬ ಪದ. ಇದರ ಅರ್ಥ "ಸಣ್ಣ ಚೂಪಾದ ಬ್ರಶ್"ಎಂದು. ಈಗ ನಾವು ಬಳಸುವ ಪೆನ್ಸಿಲ್ ಗೆ ಈ ಹೆಸರು ನೀಡಿ ಜನಪ್ರಿಯಗೊಳಿಸಿದ್ದು ಕಾಂಟೆ. ೧೭೯೫ರಲ್ಲಿ ಇದನ್ನು ತಯಾರಿಸಿದರು. ಕಾಂಟೆ ಪೆನ್ಸಿಲ್
ತಯಾರಿಸಲು ಬಳಸಿದ ವಿಧಾನ ಇಂದಿಗೂ ಬಳಕೆಯಲ್ಲಿದೆ.ಗ್ರಾಫೈಟ್ ಅನ್ನು ಕೆಲವು ಮಿಶ್ರಣದಲ್ಲಿ ಬೆರೆಸಿ ಒತ್ತುವ ಯಂತ್ರದ ಮೂಲಕ ಹಾಯಿಸಿ ತೆಳ್ಳನೆ ಆಕಾರಕ್ಕೆ ತರುತ್ತಾರೆ. ಇದೇ ವೇಳೆ ,ಈ ತೆಳ್ಳನೆ ಗ್ರಾಫೈಟ್ ಸೇರಿಸಲು ಬೇಕಾದ ಕಟ್ಟಿಗೆಯ ತುಂಡುಗಳನ್ನು ಸಿದ್ದ ಮಾಡಿ, ಅದರೊಳಗೆ ಗ್ರಾಫೈಟ್ ತುಂಡನ್ನು ಕೂರಿಸುತ್ತಾರೆ. ಪ್ರಸ್ತುತ ಜಗತ್ತಿನಲ್ಲಿ 350 ಪರಿಮಳಗಳಲ್ಲಿ , 72 ಬಣ್ಣಗಳಲ್ಲಿ ತಯಾರಾಗುತ್ತದೆ. ಕಪ್ಪು ಗ್ರಾಫೈಟ್ ಪೆನ್ಸಿಲ್ ನಲ್ಲಿ 19 ರೀತಿ ಇವೆ. ಇವು ಗ್ರಾಫೈಟ್ ಒರಟುತನದ ಆಧಾರದ ಮೇಲೆ ಪ್ರತ್ಯೇಕಗೊಳಿಸಲಾಗಿದೆ . ಕಾಗದವಲ್ಲದೆ ವಿವಿಧ ಮೇಲ್ಮೈ ಮೇಲೆ ಬರೆಯುವಂಥ ಪೆನ್ಸಿಲ್ ಗಳೂ ಇವೆ. (ಸಂಗ್ರಹ )
No comments:
Post a Comment