Wednesday, September 8, 2010

1. ಕೋಲ್ಯ ಬಟ್ಟೆ ಆರಿಸಲೆಂದು ಒಂದು ಗಾರ್ಮೆಂಟ್ಸ್ ಅಂಗಡಿಗೆ ಹೋದ. ಎಲ್ಲವನ್ನು ಹುಡುಕಿದ ಮೇಲೆ ರೆಡಿಮೇಡ್ ಷರ್ಟ್ ಯಾವುದೂ ಅವನಿಗೆ ಇಷ್ಟವಾಗಲಿಲ್ಲ. ಕೊನೆಗೆ ....
ಕೋಲ್ಯ ; ಒಂದು ಒಳ್ಳೆಯ ಷರ್ಟ್ ಪೀಸ್ ತೋರಿಸಿ. ..
ಮಾಲೀಕ ; ಪ್ಲೇನ್ ನಲ್ಲಿ ತೋರಿಸಲಾ?
ಕೋಲ್ಯ ; ಛೇ..ಇಷ್ಟು ಚಿಕ್ಕ ಪೀಸ್ ಬಟ್ಟೆಗಾಗಿ ಪ್ಲೈನ್ ಯಾಕೆ? .
ನಿಮ್ಮ ಅಂಗಡಿಯಲ್ಲೇ ತೋರಿಸಿ..

2. ಭಿಕ್ಷುಕ :ಅಮ್ಮ ,ತಾಯಿ, ಏನಾದರೂ ಇದ್ದರೆ ಕೊಡಮ್ಮ,
ಮಾಲಿಕ : ನನ್ನ ಹೆಂಡ್ತಿ ಇಲ್ಲ . ಮುಂದಕ್ಕೆ ಹೋಗಯ್ಯ.
ಭಿಕ್ಷುಕ : ಸ್ವಾಮಿ, ನಾನು ಕೇಳಿದ್ದು ಭಿಕ್ಷೆಯನ್ನು ,
ನಿಮ್ಮ ಹೆಂಡತಿಯನ್ನಲ್ಲ.

3.ಕೋಲ್ಯನ ತಂದೆ ತುಂಬಾ ಸಿಟ್ಟಿನಲ್ಲಿದ್ದರು. ಆಗ ತಾನೆ ಪರೀಕ್ಕ್ಷೆ ಮುಗಿಸಿ ಮನೆಗೆ ಬಂದ ಕೋಲ್ಯನನ್ನು ಕೇಳಿದರು,
"ಕೋಲ್ಯ ಟೆಸ್ಟ್ ನಲ್ಲಿ ಎಷ್ಟು ಪ್ರಶ್ನೆ ಕೇಳಿದ್ದರು?"
ಕೋಲ್ಯ-"೫"
ಕೋಲ್ಯ ನ ತಂದೆ ;" ಅದರಲ್ಲಿ ಎಷ್ಟು ಪ್ರಶ್ನೆಗಳಿಗೆ ನೀನು ಉತ್ತರಿಸಲ್ಲಿಲ್ಲ ?
ಕೋಲ್ಯ -" ಮೂದಲ ೩ ಮತ್ತು ಕೊನೆಯ ೨ .

4. ಪೆಟ್ರೋಲ್ ಹಾಕುವವ : ಸರ್, ಎಷ್ಟು ಲೀಟರ್ ಪೆಟ್ರೋಲ್ ಹಾಕಲಿ?
ಗ್ರಾಹಕ  : ಲೀಟರ್ ಗೀಟರ್ಎಲ್ಲ  ಬೇಡ ,  ಒಂದು 10 -15
ರೂಪಾಯಿದು ಪೆಟ್ರೋಲ್ ಗಾಡಿ ಮೇಲೆ ಚಿಮುಕಿಸಿ ಬಿಡು,
 ಗಾಡಿಗೆ ಬೆಂಕಿ ಹಚ್ಚಿಟ್ಟು,ಮನೆಗೆ ನಡೆದುಕೊಂಡು ಹೋಗುತ್ತೇನೆ..

No comments:

Post a Comment