Thursday, September 23, 2010

ನಿಮಗಿದು ಗೊತ್ತೇ?

ಇಂಗ್ಲಿಷ್ ನ 6 ಪದಗಳಲ್ಲಿ ಮಾತ್ರ UU ಅಕ್ಷರಗಳು ಸಂಯೋಗಗೊಂಡಿವೆ. ಅವು Muumuu , vacuum , Continuum , duumvirate ಮತ್ತು residuum . ಇವುಗಳನ್ನು ಓದಲು ಸ್ವಲ್ಪ ತೊಂದರೆಯಾಗಬಹುದು. ಅರ್ಥವಿಲ್ಲದ್ದು ಅಂದುಕೊಳ್ಳಬೇಡಿ, ಇವುಗಳಿಗೆ ಅರ್ಥವೂ ಇವೆ. (ಸಂಗ್ರಹ )


ಗ್ರಾಫೈಟ್ ಪೆನ್ಸಿಲ್

ಪೆನ್ಸಿಲ್ ಪದ ಮೂಲ ಲ್ಯಾಟಿನ್ ಭಾಷೆಯ "ಪೆನ್ಸಿಲಸ್"ಎಂಬ ಪದ. ಇದರ ಅರ್ಥ "ಸಣ್ಣ ಚೂಪಾದ ಬ್ರಶ್"ಎಂದು. ಈಗ ನಾವು ಬಳಸುವ ಪೆನ್ಸಿಲ್ ಗೆ ಹೆಸರು ನೀಡಿ ಜನಪ್ರಿಯಗೊಳಿಸಿದ್ದು ಕಾಂಟೆ. ೧೭೯೫ರಲ್ಲಿ ಇದನ್ನು ತಯಾರಿಸಿದರು. ಕಾಂಟೆ ಪೆನ್ಸಿಲ್
ತಯಾರಿಸಲು ಬಳಸಿದ ವಿಧಾನ ಇಂದಿಗೂ ಬಳಕೆಯಲ್ಲಿದೆ.ಗ್ರಾಫೈಟ್ ಅನ್ನು ಕೆಲವು ಮಿಶ್ರಣದಲ್ಲಿ ಬೆರೆಸಿ ಒತ್ತುವ ಯಂತ್ರದ ಮೂಲಕ ಹಾಯಿಸಿ ತೆಳ್ಳನೆ ಆಕಾರಕ್ಕೆ ತರುತ್ತಾರೆ. ಇದೇ ವೇಳೆ , ತೆಳ್ಳನೆ ಗ್ರಾಫೈಟ್ ಸೇರಿಸಲು ಬೇಕಾದ ಕಟ್ಟಿಗೆಯ ತುಂಡುಗಳನ್ನು ಸಿದ್ದ ಮಾಡಿ, ಅದರೊಳಗೆ ಗ್ರಾಫೈಟ್ ತುಂಡನ್ನು ಕೂರಿಸುತ್ತಾರೆ. ಪ್ರಸ್ತುತ ಜಗತ್ತಿನಲ್ಲಿ 350 ಪರಿಮಳಗಳಲ್ಲಿ , 72 ಬಣ್ಣಗಳಲ್ಲಿ ತಯಾರಾಗುತ್ತದೆ. ಕಪ್ಪು ಗ್ರಾಫೈಟ್ ಪೆನ್ಸಿಲ್ ನಲ್ಲಿ 19 ರೀತಿ ಇವೆ. ಇವು ಗ್ರಾಫೈಟ್ ಒರಟುತನದ ಆಧಾರದ ಮೇಲೆ ಪ್ರತ್ಯೇಕಗೊಳಿಸಲಾಗಿದೆ . ಕಾಗದವಲ್ಲದೆ ವಿವಿಧ ಮೇಲ್ಮೈ ಮೇಲೆ ಬರೆಯುವಂಥ ಪೆನ್ಸಿಲ್ ಗಳೂ ಇವೆ. (ಸಂಗ್ರಹ )

Friday, September 10, 2010

ಸುಭಾಷಿತ


. ನಿಮ್ಮ ಸ್ನೇಹಿತರನ್ನು ಮತ್ತು ನಿಮ್ಮ ಶತ್ರುಗಳನ್ನು ಪ್ರೀತಿಯಿಂದ ಕಾಣಿ.
ನಿಮ್ಮ ಗೆಲುವಿಗೆ ನಿಮ್ಮ ಸ್ನೇಹಿತರು ನೆರವಾಗುತ್ತಾರೆ.
ಆದರೆ ನೀವು ಗೆಲ್ಲುವುದಕ್ಕೆ ನಿಮ್ಮ ಶತ್ರುಗಳು ಕಾರಣವಾಗುತ್ತಾರೆ



ನಗೆ ಹನಿ

ಹೆಂಡತಿ : ನಾನು ಆಧುನಿಕ ವಚನ ಸಾಹಿತ್ಯ ಬರೆದಿದ್ದೇನೆ ಕಣ್ರೀ...
ಗಂಡ : ಹಾಗೆಂದರೇನು?
ಹೆಂಡತಿ : "ನೋಡಲೊಂದು ಟಿ.ವಿ. ,ಮಾತಾಡಲೊಂದು ಮೊಬೈಲ್ ,
ಆಡಲೊಂದು ಕಂಪ್ಯೂಟರ್ , ಜೊತೆಗೆ ನಿತ್ಯ ಹೋಟೆಲ್ ಊಟ,
ಖರ್ಚಿಗೊಂದು ಕ್ರೆಡಿಟ್ ಕಾರ್ಡ್ -
ಇಷ್ಟಿದ್ದರೆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ .

Wednesday, September 8, 2010

1. ಕೋಲ್ಯ ಬಟ್ಟೆ ಆರಿಸಲೆಂದು ಒಂದು ಗಾರ್ಮೆಂಟ್ಸ್ ಅಂಗಡಿಗೆ ಹೋದ. ಎಲ್ಲವನ್ನು ಹುಡುಕಿದ ಮೇಲೆ ರೆಡಿಮೇಡ್ ಷರ್ಟ್ ಯಾವುದೂ ಅವನಿಗೆ ಇಷ್ಟವಾಗಲಿಲ್ಲ. ಕೊನೆಗೆ ....
ಕೋಲ್ಯ ; ಒಂದು ಒಳ್ಳೆಯ ಷರ್ಟ್ ಪೀಸ್ ತೋರಿಸಿ. ..
ಮಾಲೀಕ ; ಪ್ಲೇನ್ ನಲ್ಲಿ ತೋರಿಸಲಾ?
ಕೋಲ್ಯ ; ಛೇ..ಇಷ್ಟು ಚಿಕ್ಕ ಪೀಸ್ ಬಟ್ಟೆಗಾಗಿ ಪ್ಲೈನ್ ಯಾಕೆ? .
ನಿಮ್ಮ ಅಂಗಡಿಯಲ್ಲೇ ತೋರಿಸಿ..

2. ಭಿಕ್ಷುಕ :ಅಮ್ಮ ,ತಾಯಿ, ಏನಾದರೂ ಇದ್ದರೆ ಕೊಡಮ್ಮ,
ಮಾಲಿಕ : ನನ್ನ ಹೆಂಡ್ತಿ ಇಲ್ಲ . ಮುಂದಕ್ಕೆ ಹೋಗಯ್ಯ.
ಭಿಕ್ಷುಕ : ಸ್ವಾಮಿ, ನಾನು ಕೇಳಿದ್ದು ಭಿಕ್ಷೆಯನ್ನು ,
ನಿಮ್ಮ ಹೆಂಡತಿಯನ್ನಲ್ಲ.

3.ಕೋಲ್ಯನ ತಂದೆ ತುಂಬಾ ಸಿಟ್ಟಿನಲ್ಲಿದ್ದರು. ಆಗ ತಾನೆ ಪರೀಕ್ಕ್ಷೆ ಮುಗಿಸಿ ಮನೆಗೆ ಬಂದ ಕೋಲ್ಯನನ್ನು ಕೇಳಿದರು,
"ಕೋಲ್ಯ ಟೆಸ್ಟ್ ನಲ್ಲಿ ಎಷ್ಟು ಪ್ರಶ್ನೆ ಕೇಳಿದ್ದರು?"
ಕೋಲ್ಯ-"೫"
ಕೋಲ್ಯ ನ ತಂದೆ ;" ಅದರಲ್ಲಿ ಎಷ್ಟು ಪ್ರಶ್ನೆಗಳಿಗೆ ನೀನು ಉತ್ತರಿಸಲ್ಲಿಲ್ಲ ?
ಕೋಲ್ಯ -" ಮೂದಲ ೩ ಮತ್ತು ಕೊನೆಯ ೨ .

4. ಪೆಟ್ರೋಲ್ ಹಾಕುವವ : ಸರ್, ಎಷ್ಟು ಲೀಟರ್ ಪೆಟ್ರೋಲ್ ಹಾಕಲಿ?
ಗ್ರಾಹಕ  : ಲೀಟರ್ ಗೀಟರ್ಎಲ್ಲ  ಬೇಡ ,  ಒಂದು 10 -15
ರೂಪಾಯಿದು ಪೆಟ್ರೋಲ್ ಗಾಡಿ ಮೇಲೆ ಚಿಮುಕಿಸಿ ಬಿಡು,
 ಗಾಡಿಗೆ ಬೆಂಕಿ ಹಚ್ಚಿಟ್ಟು,ಮನೆಗೆ ನಡೆದುಕೊಂಡು ಹೋಗುತ್ತೇನೆ..