Friday, February 3, 2012

ಸುಭಾಷಿತ

ಜೀವನದಲ್ಲಿ ಹುಲ್ಲಿನಂತೆ ಸರಳವಾಗಿರಿ, ಆದರೆ ಗಟ್ಟಿಯಾಗಿರಿ.ಬಿರುಗಾಳಿ ಬೀಸಿದಾಗ ಮರಗಳು ಉರುಳಬಹುದು.
ಆದರೆ ಹುಲ್ಲಿಗೆ ಏನೇನೂ ಆಗುವುದಿಲ್ಲ.ಅದು ನಿಶ್ಚಿಂತೆಯಿಂದ ಇರುತ್ತದೆ.
-----------------------------------------------------------------------------------
ಜೀವನದಲ್ಲಿ ಏನನ್ನೂ ನಿರೀಕ್ಷಿಸಬೇಡಿ,
ನಿರೀಕ್ಷಿಸಿದ್ದು ಸಿಗದಿದ್ದರೆ ಬೇಸರವಾಗುತ್ತದೆ.
ಅನಿರೀಕ್ಷಿತವಾಗಿ ಸಿಕ್ಕಿದ್ದು ಸಂತಸ ಉಂಟು ಮಾಡುತ್ತದೆ.
ಆದ್ದರಿಂದ, ನಿರೀಕ್ಷೆ ಕೈ ಬಿಡಿ, ಸಂತಸದಿಂದ ಇರಿ.

------------------------------------------------------------------------------------
ಏನನ್ನೋ ಕಳೆದುಕೊಂಡಾಗ ನೀವು ಕಣ್ಣೀರು ಹಾಕುತ್ತಿರಲ್ಲಾ,
ಆ ನೋವು ನೋವಲ್ಲ !
ಕಳೆದುಕೊಂಡು ಎನೂ ಆಗಿಲ್ಲದಂತೆ ನಗುತ್ತಿರುತ್ತಿರಲ್ಲ,
ಅದು ಅತ್ಯಂತ ನೋವಿನ ಕ್ಷಣ.
-------------------------------------------------------------------------------------


ಯಶಸ್ಸು ಪ್ರೇಯಸಿಯಂತೆ,ಅದು ನಮ್ಮನ್ನು ಯಾವಾಗ ಬೇಕಾದರೂ ಕೈ ಬಿಡಬಹುದು.
ಆದರೆ, ಸೋಲು ತಾಯಿಯಂತೆ ,ಅದು ಸದಾ ನಮಗೆ ಈ ಅಮೂಲ್ಯ ಜೀವನದ ಅಧ್ಯಾಯಗಳನ್ನು ಕಲಿಸುತ್ತದೆ.

-------------------------------------------------------------------------------------
ನಿಮಗೆ ಮೋಸ ಮಾಡುತ್ತಿರುವ ಕಣ್ಣುಗಳನ್ನು ನೀವು ಅರ್ಥೈಸೀಕೊಳ್ಳದಿದ್ದರೆ ಅದು ನಿಮ್ಮ ತಪ್ಪಲ್ಲ.
ಆದರೆ, ನಿಮ್ಮನ್ನು ಪ್ರೀತಿಸುವ ಕಣ್ಣುಗಳನ್ನು ಅರಿಯದೇ ಹೋದರೆ ಅದು ಖಂಡಿತ ನಿಮ್ಮ ಪ್ರಮಾದ.

------------------------------------------------------------------------------------
ಪೂರ್ಣ ವಿರಾಮ ( . ) ನಿಜವಾದ ಅಂತ್ಯವಲ್ಲ.
ಮುಂದಿನ ವಾಖ್ಯದ ಆರಂಭಕ್ಕೆ ನಾಂದಿ.
ಜೀವನದ ವೈಫಲ್ಯಗಳು ಬದುಕಿನ ಅಂತ್ಯವಲ್ಲ.
ನಿಮ್ಮ ಯಶಸ್ಸಿನ ಆರಂಭಕ್ಕೆ ನಾಂದಿ.....

------------------------------------------------------------------------------------------

No comments:

Post a Comment