Sunday, May 27, 2012

Jokes

A businessman tells his friend that his company is looking for a new accountant,

His friend asks, “Didn’t your company hire a new accountant a few weeks ago?”

The businessman replies, “That’s the accountant we’re looking for.”


Sunday, May 13, 2012

   Dear All, 

Social  Networking where you have your share of equity !

 Create a ID and Log in....

http://www.zurker.in/i-149431-wvrgjcspjx   

Friday, February 3, 2012

ಸುಭಾಷಿತ

ಜೀವನದಲ್ಲಿ ಹುಲ್ಲಿನಂತೆ ಸರಳವಾಗಿರಿ, ಆದರೆ ಗಟ್ಟಿಯಾಗಿರಿ.ಬಿರುಗಾಳಿ ಬೀಸಿದಾಗ ಮರಗಳು ಉರುಳಬಹುದು.
ಆದರೆ ಹುಲ್ಲಿಗೆ ಏನೇನೂ ಆಗುವುದಿಲ್ಲ.ಅದು ನಿಶ್ಚಿಂತೆಯಿಂದ ಇರುತ್ತದೆ.
-----------------------------------------------------------------------------------
ಜೀವನದಲ್ಲಿ ಏನನ್ನೂ ನಿರೀಕ್ಷಿಸಬೇಡಿ,
ನಿರೀಕ್ಷಿಸಿದ್ದು ಸಿಗದಿದ್ದರೆ ಬೇಸರವಾಗುತ್ತದೆ.
ಅನಿರೀಕ್ಷಿತವಾಗಿ ಸಿಕ್ಕಿದ್ದು ಸಂತಸ ಉಂಟು ಮಾಡುತ್ತದೆ.
ಆದ್ದರಿಂದ, ನಿರೀಕ್ಷೆ ಕೈ ಬಿಡಿ, ಸಂತಸದಿಂದ ಇರಿ.

------------------------------------------------------------------------------------
ಏನನ್ನೋ ಕಳೆದುಕೊಂಡಾಗ ನೀವು ಕಣ್ಣೀರು ಹಾಕುತ್ತಿರಲ್ಲಾ,
ಆ ನೋವು ನೋವಲ್ಲ !
ಕಳೆದುಕೊಂಡು ಎನೂ ಆಗಿಲ್ಲದಂತೆ ನಗುತ್ತಿರುತ್ತಿರಲ್ಲ,
ಅದು ಅತ್ಯಂತ ನೋವಿನ ಕ್ಷಣ.
-------------------------------------------------------------------------------------


ಯಶಸ್ಸು ಪ್ರೇಯಸಿಯಂತೆ,ಅದು ನಮ್ಮನ್ನು ಯಾವಾಗ ಬೇಕಾದರೂ ಕೈ ಬಿಡಬಹುದು.
ಆದರೆ, ಸೋಲು ತಾಯಿಯಂತೆ ,ಅದು ಸದಾ ನಮಗೆ ಈ ಅಮೂಲ್ಯ ಜೀವನದ ಅಧ್ಯಾಯಗಳನ್ನು ಕಲಿಸುತ್ತದೆ.

-------------------------------------------------------------------------------------
ನಿಮಗೆ ಮೋಸ ಮಾಡುತ್ತಿರುವ ಕಣ್ಣುಗಳನ್ನು ನೀವು ಅರ್ಥೈಸೀಕೊಳ್ಳದಿದ್ದರೆ ಅದು ನಿಮ್ಮ ತಪ್ಪಲ್ಲ.
ಆದರೆ, ನಿಮ್ಮನ್ನು ಪ್ರೀತಿಸುವ ಕಣ್ಣುಗಳನ್ನು ಅರಿಯದೇ ಹೋದರೆ ಅದು ಖಂಡಿತ ನಿಮ್ಮ ಪ್ರಮಾದ.

------------------------------------------------------------------------------------
ಪೂರ್ಣ ವಿರಾಮ ( . ) ನಿಜವಾದ ಅಂತ್ಯವಲ್ಲ.
ಮುಂದಿನ ವಾಖ್ಯದ ಆರಂಭಕ್ಕೆ ನಾಂದಿ.
ಜೀವನದ ವೈಫಲ್ಯಗಳು ಬದುಕಿನ ಅಂತ್ಯವಲ್ಲ.
ನಿಮ್ಮ ಯಶಸ್ಸಿನ ಆರಂಭಕ್ಕೆ ನಾಂದಿ.....

------------------------------------------------------------------------------------------

Wednesday, February 1, 2012

ಸುಭಾಷಿತ

ಮುಖ ಮನಸ್ಸಿನ ಕನ್ನಡಿ ಇರಬಹುದು.
ಆದರೆ, ಹೃದಯದ ನೋವಿಗೆ ಮುಖವಾಡವು ಆಗಿರಬಹುದು.
ಹಾಗಾಗಿ, ಪ್ರಮಾಣಿಸಿ ನೋಡಿ,
ಸಂತೋಷವಾಗಿರುವ ಮುಖ ಅನೇಕ ನೋವುಗಳನ್ನು ಮರೆ ಮಾಡಿರಬಹುದು.
**************************************************************************

ಜೀವನ ಅನ್ನೋದು ಅವಕಾಶಗಳಿಂದ ತುಂಬಿ  

ಹರಿವ ನದಿ ಇದ್ದ ಹಾಗೆ,  

ನಾವು ಅದರ ಪಕ್ಕ ಬಕೆಟ್ ಹಿಡಿದು ನಿಲ್ಲುತ್ತೇವೋ 

ಅಥವಾ ಚಮಚ ಹಿಡಿದು ನಿಲ್ಲುತ್ತೇವೋ, 

ಅದರಂತೆ ನಮಗೆ ಯಶಸ್ಸು ಲಭಿಸುತ್ತದೆ.

***************************************************************************

ಕ್ಷಮಿಸುವುದರಲ್ಲೂ ಜೀವನದ ಸಾರ್ಥಕತೆ ಇದೆ.

ನೀವು ಕ್ಷಮಿಸುವ ಪ್ರವೃತ್ತಿ ಬೆಳೆಸಿಕೊಂಡಿದ್ದಿರಿ ಎಂದರೆ, 

ಬೇರೆಯವರಿಗಾಗಿ ನೀವು ಏನೋ ಮಾಡುತ್ತಿದ್ದಿರ ಎಂದು ಅರ್ಥವಲ್ಲ. 

ನಿಮ್ಮ ಬದುಕು ಚೆಂದವಾಗಿಸಿಕೊಳ್ಳಲು ನಿಮಗೆ ನೀವೇ ಮಾಡಿಕೊಳ್ಳುತ್ತಿರುವ ಒಂದು ಉಪಯೋಗ.

Monday, October 4, 2010

ಸುಭಾಷಿತ

ಹೊಸ ವಸ್ತುಗಳು , ಹೊಸ ಸಂಗತಿಗಳು ನಿಮ್ಮ ಬದುಕಿನಲ್ಲಿ ಪ್ರವೇಶ ಪಡೆದು,ನಿಮ್ಮನ್ನು ಸಂತೋಷಪಡಿಸಬಹುದು.

ಆದರೆ,ಕಳೆದುಹೋದ ಅಮೂಲ್ಯ ವಸ್ತುಗಳ ಸ್ತಳಕ್ಕೆ ಸೂಕ್ತವಾದ ಯಾವ ವಸ್ತುಗಳು ಮತ್ತೆ ಬರುವುದಿಲ್ಲ.

Thursday, September 23, 2010

ನಿಮಗಿದು ಗೊತ್ತೇ?

ಇಂಗ್ಲಿಷ್ ನ 6 ಪದಗಳಲ್ಲಿ ಮಾತ್ರ UU ಅಕ್ಷರಗಳು ಸಂಯೋಗಗೊಂಡಿವೆ. ಅವು Muumuu , vacuum , Continuum , duumvirate ಮತ್ತು residuum . ಇವುಗಳನ್ನು ಓದಲು ಸ್ವಲ್ಪ ತೊಂದರೆಯಾಗಬಹುದು. ಅರ್ಥವಿಲ್ಲದ್ದು ಅಂದುಕೊಳ್ಳಬೇಡಿ, ಇವುಗಳಿಗೆ ಅರ್ಥವೂ ಇವೆ. (ಸಂಗ್ರಹ )


ಗ್ರಾಫೈಟ್ ಪೆನ್ಸಿಲ್

ಪೆನ್ಸಿಲ್ ಪದ ಮೂಲ ಲ್ಯಾಟಿನ್ ಭಾಷೆಯ "ಪೆನ್ಸಿಲಸ್"ಎಂಬ ಪದ. ಇದರ ಅರ್ಥ "ಸಣ್ಣ ಚೂಪಾದ ಬ್ರಶ್"ಎಂದು. ಈಗ ನಾವು ಬಳಸುವ ಪೆನ್ಸಿಲ್ ಗೆ ಹೆಸರು ನೀಡಿ ಜನಪ್ರಿಯಗೊಳಿಸಿದ್ದು ಕಾಂಟೆ. ೧೭೯೫ರಲ್ಲಿ ಇದನ್ನು ತಯಾರಿಸಿದರು. ಕಾಂಟೆ ಪೆನ್ಸಿಲ್
ತಯಾರಿಸಲು ಬಳಸಿದ ವಿಧಾನ ಇಂದಿಗೂ ಬಳಕೆಯಲ್ಲಿದೆ.ಗ್ರಾಫೈಟ್ ಅನ್ನು ಕೆಲವು ಮಿಶ್ರಣದಲ್ಲಿ ಬೆರೆಸಿ ಒತ್ತುವ ಯಂತ್ರದ ಮೂಲಕ ಹಾಯಿಸಿ ತೆಳ್ಳನೆ ಆಕಾರಕ್ಕೆ ತರುತ್ತಾರೆ. ಇದೇ ವೇಳೆ , ತೆಳ್ಳನೆ ಗ್ರಾಫೈಟ್ ಸೇರಿಸಲು ಬೇಕಾದ ಕಟ್ಟಿಗೆಯ ತುಂಡುಗಳನ್ನು ಸಿದ್ದ ಮಾಡಿ, ಅದರೊಳಗೆ ಗ್ರಾಫೈಟ್ ತುಂಡನ್ನು ಕೂರಿಸುತ್ತಾರೆ. ಪ್ರಸ್ತುತ ಜಗತ್ತಿನಲ್ಲಿ 350 ಪರಿಮಳಗಳಲ್ಲಿ , 72 ಬಣ್ಣಗಳಲ್ಲಿ ತಯಾರಾಗುತ್ತದೆ. ಕಪ್ಪು ಗ್ರಾಫೈಟ್ ಪೆನ್ಸಿಲ್ ನಲ್ಲಿ 19 ರೀತಿ ಇವೆ. ಇವು ಗ್ರಾಫೈಟ್ ಒರಟುತನದ ಆಧಾರದ ಮೇಲೆ ಪ್ರತ್ಯೇಕಗೊಳಿಸಲಾಗಿದೆ . ಕಾಗದವಲ್ಲದೆ ವಿವಿಧ ಮೇಲ್ಮೈ ಮೇಲೆ ಬರೆಯುವಂಥ ಪೆನ್ಸಿಲ್ ಗಳೂ ಇವೆ. (ಸಂಗ್ರಹ )

Friday, September 10, 2010

ಸುಭಾಷಿತ


. ನಿಮ್ಮ ಸ್ನೇಹಿತರನ್ನು ಮತ್ತು ನಿಮ್ಮ ಶತ್ರುಗಳನ್ನು ಪ್ರೀತಿಯಿಂದ ಕಾಣಿ.
ನಿಮ್ಮ ಗೆಲುವಿಗೆ ನಿಮ್ಮ ಸ್ನೇಹಿತರು ನೆರವಾಗುತ್ತಾರೆ.
ಆದರೆ ನೀವು ಗೆಲ್ಲುವುದಕ್ಕೆ ನಿಮ್ಮ ಶತ್ರುಗಳು ಕಾರಣವಾಗುತ್ತಾರೆ



ನಗೆ ಹನಿ

ಹೆಂಡತಿ : ನಾನು ಆಧುನಿಕ ವಚನ ಸಾಹಿತ್ಯ ಬರೆದಿದ್ದೇನೆ ಕಣ್ರೀ...
ಗಂಡ : ಹಾಗೆಂದರೇನು?
ಹೆಂಡತಿ : "ನೋಡಲೊಂದು ಟಿ.ವಿ. ,ಮಾತಾಡಲೊಂದು ಮೊಬೈಲ್ ,
ಆಡಲೊಂದು ಕಂಪ್ಯೂಟರ್ , ಜೊತೆಗೆ ನಿತ್ಯ ಹೋಟೆಲ್ ಊಟ,
ಖರ್ಚಿಗೊಂದು ಕ್ರೆಡಿಟ್ ಕಾರ್ಡ್ -
ಇಷ್ಟಿದ್ದರೆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ .